ತುಂಬ ಸಮಭಾಜಕೀಯ ರಾಕೆಟ್ ಉಡಾವಣಾ ಠಾಣ್ಯ -
ಕೇರಳ ರಾಜ್ಯದ ತಿರುವನಂತಪುರದಿಂದ ಉತ್ತರಕ್ಕೆ 16 ಕಿ.ಮೀ. ದೂರದಲ್ಲಿರುವ ಮತ್ತು ಭಾರತವನ್ನು ಆಕಾಶಯುಗಕ್ಕೆ ಆವಾಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ಥಳ. ತುಂಬ (ಖಿ) ಈಕ್ವೆಟೋರಿಯಲ್ (ಇ) ರಾಕೆಟ್ (ಖ) ಲಾಂಚಿಂಗ್ (ಐ) ಸ್ಟೇಷನ್ (S)-ಖಿಇಖಐS ಎಂಬುದಾಗಿ ಪ್ರಸಿದ್ಧವಾಗಿದೆ. 1963ರಲ್ಲಿ ಖಿಇಖಐS ನಿಂದ ಎರಡು ಹಂತದ 30 ಕಿ.ಗ್ರಾಂ. ವೈಜ್ಞಾನಿಕ ಪಾವತಿ ಹೊರೆಯನ್ನು (ಪೇಲೋಡ್) ಧರಿಸಿದ ಪರಿಜ್ಞಾಪೀ (ಸೌಂಡಿಂಗ್) ರಾಕೆಟ್ಟನ್ನು ಮೊದಲಬಾರಿಗೆ ಉಡಾಯಿಸಲಾಯಿತು. ಇದೊಂದು ನೈಕಿ-ಅಪಾಚಿ ರಾಕೆಟ್ (ನೈಕಿ=ಎರಡು/ಮೂರು-ಹಂತದ ಪ್ರತಿ ವಿಮಾನ ಯಾ ಪ್ರತಿಕ್ಷಿಪಣಿ ರಾಕೆಟ್; (ಅಪಾಚಿ=ಪುಂಡ). ಇದು ಏರಿದ ಎತ್ತರ 160 ಕಿ.ಮೀ. ಸಮಭಾಜಕೀಯ ವಲಯಗಳ ಉನ್ನತ ವಾಯುಮಂಡಲದಲ್ಲಿನ ಮಾರುತಗಳನ್ನು ತೇವ-ಮೋಡ (ವೇಪರ್ ಕ್ಲೌಡ್) ತಂತ್ರದಿಂದ ಅನ್ವೇಷಿಸುವುದು ಇಲ್ಲಿನ ಉದ್ದೇಶ. ಆಕಾಶ ಸಂಶೋಧನೆಯ ಅತಿ ವಿಶೇಷೀಕೃತ ಕ್ಷೇತ್ರದಲ್ಲಿ ಇದೊಂದು ನಮ್ರ ಪ್ರಾರಂಭ. ಆದರೆ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರದ ವೈಜ್ಞಾನಿಕ ಪ್ರಗತಿಯಲ್ಲಿ ಇದು ಬಲು ಮಹತ್ವದ ಯುಗವನ್ನು ಪ್ರವರ್ತಿಸಿತು ಎಂಬುದಂತೂ ನಿಜ.

ಬಾಹ್ಯಾಕಾಶದ ಶಾಂತಿಯುತ ಬಳಕೆಗಳನ್ನು ಕುರಿತ ವಿಶ್ವಸಂಸ್ಥೆಯ ವೈಜ್ಞಾನಿಕ ಮತ್ತು ತಾಂತ್ರಿಕ ಉಪಸಮಿತಿ, 1962 ರಲ್ಲಿ, ಅಂತಾರಾಷ್ಟ್ರೀಯ ಸಮಭಾಜಕೀಯ ಪರಿಜ್ಞಾಪೀ ರಾಕೆಟ್ ಉಡಾವಣಾ ಸೌಕರ್ಯವೊಂದರ ಸ್ಥಾಪನೆಯನ್ನು ಪ್ರತಿಪಾದಿಸುತ್ತ ವೈಜ್ಞಾನಿಕ ಮೌಲ್ಯ ಹಾಗೂ ಉಪಯುಕ್ತತೆಯನ್ನು ಈ ತೆರನಾಗಿ ಅವಧರಿಸಿತು : ವಾಯುಮಂಡಲದ ಬಲು ದೊಡ್ಡ ಅಂಶದ ಪ್ರಾಯೋಗಿಕಾಧ್ಯಯನ ನಡೆಸಲು ಪರಿಜ್ಞಾಪೀ ರಾಕೆಟ್ಟುಗಳು ಅತ್ಯಂತ ಉಪಯುಕ್ತ ಉಪಕರಣಗಳಾಗಿವೆ; ನಿಜಕ್ಕೂ ವಾಯುಮಂಡಲದಲ್ಲಿ ಬಲೂನುಗಳ ಪರಿಮಿತಿಯಿಂದ ಆಚೆಗೆ ಮತ್ತು ಉಪಗ್ರಹಗಳು ಸುಕ್ಷೇಮವಾಗಿ ಕ್ರಮಿಸಬಲ್ಲ ಕನಿಷ್ಟ ಉನ್ನತಿಯಿಂದ ಈಚಿಗೆ-ಅಂದರೆ ಸುಮಾರು 30-200 ಕಿ.ಮೀ. ಅಂತರದ ವಲಯದಲ್ಲಿ- ಈ ರಾಕೆಟುಗಳಿಂದ ಮಾತ್ರ ಪ್ರತ್ಯಕ್ಷ ಮಾಪನೆಗಳು ಸಾಧ್ಯ. ಸಮಭಾಜಕೀಯ ವಲಯದಲ್ಲಿ ಹವಾವಿಜ್ಞಾನವನ್ನೂ ವಾಯುನಿಯಮವನ್ನೂ ಕುರಿತಂತೆ ಇಂಥ ಮಾಪನೆಗಳು ಬಲು ಮಹತ್ವಪೂರ್ಣವಾದವು.
ಭಾರತ ಇಂಥ ಅಂತಾರಾಷ್ಟ್ರೀಯ ಸಮಭಾಜಕೀಯ ಪರಿಜ್ಞಾಪೀ ರಾಕೆಟ್ ಉಡಾವಣಾ ಸೌಕರ್ಯವೊಂದರ ಸ್ಥಾಪನೆಗೆ ಅತಿಥೇಯ ರಾಷ್ಟ್ರವಾಗಲು ತನ್ನ ಒಪ್ಪಿಗೆಯನ್ನು ವಿಶ್ವಸಂಸ್ಥೆಗೆ 1963ರಲ್ಲಿ ನೀಡಿತು. ತದಂಗವಾಗಿ ಭಾರತ ಸರ್ಕಾರದ ಪರಮಾಣುಶಕ್ತಿ ಇಲಾಖೆಯ ವತಿಯಿಂದ ಅಂದು ಪರಮಾಣು ಶಕ್ತಿ ಆಯೋಗದ ಹಾಗೂ ಭಾರತ ರಾಷ್ಟ್ರೀಯ ಆಕಾಶ ಸಂಶೋಧನಾ ಸಮಿತಿಯ ಅಧ್ಯಕ್ಷರಾಗಿದ್ದ ವಿಕ್ರಮ್ ಎ. ಸಾರಾಭಾಯಿಯವರ ನೇತೃತ್ವದಲ್ಲಿ, ತುಂಬದಲ್ಲಿನ ಉಡಾವಣಾ ಠಾಣ್ಯ ಅಸ್ತಿತ್ವಕ್ಕೆ ಬಂದಿತು. ಈ ಸ್ಥಳವನ್ನು ಆಯಲು ಮುಖ್ಯ ಕಾರಣವೆಂದರೆ ಕಾಂತಸಮಭಾಜಕೀಯ ವೃತ್ತಕ್ಕೆ ಇದರ ಸಾಮೀಪ್ಯ, ಅರಬ್ಬೀ ಸಮುದ್ರದ ತೀರದಲ್ಲಿ ಹರಡಿದ್ದ 560 ಎಕರೆಗಳ ಈ ಮರಳುದಂಡೆಯನ್ನು 1963ರ ತರುಣದಲ್ಲಿ ವಶಪಡಿಸಿಕೊಂಡು ಮುಂದಿನ ಕೇವಲ ಮೂರು ತಿಂಗಳುಗಳಲ್ಲೇ ಇದನ್ನು ವೈಜ್ಞಾನಿಕ ಸಂಶೋಧನೆಗೊಂಡು ರಾಕೆಟ್ ಉಡಾವಣಾ ಠಾಣ್ಯವನ್ನಾಗಿ ಪರಿವರ್ತಿಸಲಾಯಿತು. ಅಮೇರಿಕ, ರಷ್ಯ ಹಾಗೂ ಫ್ರಾನ್ಸ್ ದೇಶಗಳೊಡನೆ ಭಾರತ ದ್ವಿರಾಷ್ಟ್ರ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದರಿಂದ ಅವುಗಳಿಂದ ವಿಫುಲ ನೆರವು ದೊರೆಯಿತು. 1965 ರಲ್ಲಿ ವಿಶ್ವಸಂಸ್ಥೆ ಈ ಠಾಣ್ಯಕ್ಕೆ ಮನ್ನಣೆಯನ್ನು ನೀಡಿದುದರಿಂದ ಅನೇಕ ರಾಷ್ಟ್ರಗಳ ವಿಜ್ಞಾನಿಗಳು ಸ್ಥಳೀಯ ವಿಜ್ಞಾನಿಗಳ ಸಹಯೋಗದಿಂದ ಇಲ್ಲಿ ಆಕಾಶ ಸಂಶೋಧನೆಯನ್ನು ನಡೆಸುವುದು ಸಾಧ್ಯವಾಗಿದೆ.

ಏಕ-ಇಲ್ಲವೇ ಬಹು-ಹಂತದ ರಾಕೆಟ್ಟುಗಳನ್ನು ಉಪಯೊಗಿಸಿಕೊಂಡು 350 ಕಿ.ಮೀ. ಎತ್ತರದವರೆಗೂ ತಲುಪಿ ಪ್ರಯೋಗಗಳನ್ನು ನಡೆಸಲು (1977) ಖಿಇಖಐS ಪೂರ್ಣವಾಗಿ ಸನ್ನದ್ಧಾಯಿತು. ಇಲ್ಲಿನ ವಿವಿಧ ಸೌಕರ್ಯಗಳ ಸ್ಥೂಲ ವಿವರಣೆಯನ್ನು ಮುಂದೆ ಮಾಡಿದೆ.

1 ನಿಯಂತ್ರಣ ಕೇಂದ್ರ : ಇಲ್ಲಿ ಪರಿಕರ್ಮಗಳ ನಿಯಂತ್ರಣ (ಆಪರೇಷನ್ಸ್ ಕಂಟ್ರೋಲ್), ರೇಂಜ್ ಸಂಪರ್ಕಗಳು, ರೇಂಜ್ ಸುರಕ್ಷಣೆ, ಪಾವತಿ ಹೊರೆ ಜೋಡಣೆ (ಪೇಲೋಡ್ ಅಸೆಂಬ್ಲಿ), ಭೂಧಾರಣ ಪ್ರಯೋಗಾಲಯ (ಗ್ರೌಂಡ್ ಸಪೋರ್ಟ್ ಲ್ಯಾಬೊರೆಟರಿ), ಪರೀಕ್ಷಣೆ ಹಾಗೂ ಮೌಲ್ಯೀಕರಣ, ರಾಕೆಟ್ ಎಂಜಿನೀಯರಿಂಗ್ ವಿಭಾಗ ಮತ್ತು ನಿರ್ದೇಶಕರ ಹಾಗೂ ಆಡಳಿತ ವಿಭಾಗದ ಕಛೇರಿಗಳು ಇವೆ. 

2 ರಾಕೆಟ್ ದಾಸ್ತಾನು ಮತ್ತು ಜೋಡಣೆ : ರಾಕೆಟ್ ಮೋಟರುಗಳನ್ನು, ರಾಕೆಟ್ ನೋದನಕಾರಿಗಳು (ಪ್ರೊಪೆಲ್ಲೆಂಟ್ಸ್) ಮತು ಜ್ವಲನಕಾರಿಗಳನ್ನು (ಇಗ್ನೈಟರ್ಸ್) ದಾಸ್ತಾನಿಸಲು ಸಮರ್ಪಕ ಕಟ್ಟಡಗಳನ್ನು ಒದಗಿಸಲಾಗಿದೆ.
3 ಉಡಾವಣಾ ವೇದಿಕೆ ಮತ್ತು ಬ್ಲಾಕ್ ಕಟ್ಟಡಗಳು : ಕಿನಾರೆಯ ಒತ್ತಿಗೆ ಸಂಕೀರ್ಣ-I (ಕಾಂಪ್ಲೆಕ್ಸ್-I) ಇದೆ. ಇದರಲ್ಲಿ ಮೂರು ಉಡಾವಣಾ ವೇದಿಕೆಗಳಿವೆ. ಇವುಗಳ ಮೇಲೆ ಬೇರೆ ಬೇರೆ ಬಗೆಯ ಉಡಾವಣಾ ವ್ಯವಸ್ಥೆಗಳನ್ನು ನೆಲೆಗೊಳಿಸಲಾಗಿದೆ. ಸುಮಾರು 300 ಅಡಿ ಅಂತರದಲ್ಲಿ ಕಟ್ಟಲಾಗಿರುವ ಎರಡು ಬ್ಲಾಕ್ ಮಂದಿರಗಳನ್ನು ಉಡಾವಣೆಯಲ್ಲಿ ಭಾಗವಹಿಸುವ ಕಾರ್ಯಪಡೆಗೂ (ಕ್ರೂ) ಯೋಜನೆಯ ವಿಜ್ಞಾನಿಗಳಿಗೂ ಒದಗಿಸಲಾಗಿದೆ. ಬ್ಲಾಕ್ ಕಟ್ಟಡ ಒಂದು ವಿಶೇಷವಾದ ರಚನೆ. ಇದರ ಗೋಡೆಗಳನ್ನು 12" ದಪ್ಪದ ಭದ್ರಗೊಳಿಸಿದ ಕಾಂಕ್ರೀಟಿನಿಂದ ನಿರ್ಮಿಸಿದೆ. ಇದರಲ್ಲಿ 4" ದಪ್ಪದ ಒಡೆಯದ ಕನ್ನಡಿ ಹಾಳೆಗಳಿಂದ ಆವೃತವಾದ ವೀಕ್ಷಣ ಗವಾಕ್ಷಗಳಿವೆ. ರಾಕೆಟ್ ಸ್ಫೋಟನೆ ಮಂಡಲಗಳ (ಫೈರಿಂಗ್ ಸರ್ಕೀಟ್ಸ್) ನಿಯಂತ್ರಣ ಸ್ವಿಚ್ ಫಲಕಗಳನ್ನು ಉಡವಣಾಕಾರ ನಿಯಂತ್ರಣಳನ್ನೂ ಬ್ಲಾಕ್ ಕಟ್ಟಟಡದಲ್ಲಿ ಅಳವಡಿಸಿದೆ. ಅಲ್ಲದೇ ಯೋಜನೆಯ ವಿಜಾÐನಿಗಳಿಗೆ ಪಾವತಿ ಹೊರೆಯನ್ನು ಅನುಶ್ರವಣಿಸಲು(ಮಾನಿಟರ್) ನಿಯಂತ್ರಿಣ ಸ್ವಿಚ್ ಫಲಕಗಳನ್ನು ಕೂಡ ಇಲ್ಲಿ ಒದಗಿಸಿದೆ. ನಿಯಂತ್ರಣ ಫಲಕಗಳನ್ನು ರಾಕೆಟಿಗೂ ಪಾವತಿ ಹೊರೆಗೂ ಸಂಯೋಜಿಸಲು ಬೇಕಾಗುವ ಸ್ಫೋಟನೆ ಮಂಡಲಗಳನ್ನು ಮತ್ತು ನಾಭೀಯ ಹೊರಜಿಗಳನ್ನು (ಅಂಬಿಲಿಕಲ್ ಕೇಬಲ್ಸ್) ಬ್ಲಾಕ್ ಕಟ್ಟಡದಿಂದ ಬೇರೆ ಬೇರೆ ಉಡಾವಣಾ ವೇದಿಕೆಗಳಿಗೆ ಜೋಡಿಸಿದೆ. ಚಿಕ್ಕ ರಾಕೆಟುಗಳನ್ನು, ಅಂದರೆ ಏಕ-ಹಂತದವನ್ನು, ಹೊಟ್ಟಿಸಲು ಇನ್ನೊಂದು ಉಡಾವಣಾ ಸಂಕೀರ್ಣ-II ಬ್ಲಾಕ್ ಕಟ್ಟಡ ಸಂಖ್ಯೆ-3ರರಲ್ಲಿದೆ.
4 ಭೂಧಾರಣೆ (ಗ್ರೌಂಡ್ ಸಪೋರ್ಟ್) : ಇದರಲ್ಲಿ ದೂರಮಾಪನ ಗ್ರಾಹಕ ಠಾಣ್ಯ (ಟೆಲಿಮೆಟ್ರಿ ರಿಸೀವಂಗ್ ಸ್ಟೇಷನ್), ಡಾಪ್ಲರ್ ವೇಗ ಮತ್ತು ಸ್ಥಾನ (ಆಔಗಿಂP) ವ್ಯವಸ್ಥೆ, ಕೋಟಲ್ ಐಗಿ-300 ರೇಡಾರ್ ಮತ್ತು ಟೋನ್ ರೇಂಜಿಂಗ್ ವ್ಯವಸ್ಥೆಗಳು ಇವೆ. ಚಲನಶೀಲ ಟ್ರೇಲರಿನ ಮೇಲೆ ಇವೆಲ್ಲವನ್ನೂ ಏರಿಸಿದೆ. ಪಾವತಿ ಹೊರೆಯ ಹಾರಾಟದ ವೇಳೆ ಅದರಿಂದ ವೈಜ್ಞಾನಿಕ ದತ್ತಾಂಶಗಳನ್ನು ಪಡೆಯಲು ಹಾಗೂ ಹಾರಾಟದ ಪಥವನ್ನು ತಿಳಿಯಲು ಈ ಉಪಕರಣಗಳನ್ನು ಬಳಸಲಾಗುವುದು. ಮಾರುತಗಳ ಉಷ್ಣತಾ ದತ್ತಾಂಶಗಳನ್ನು ಓಓ/ಉಒಆ-1 ಗ್ರಾಹಕ ಪೂರೈಸುತ್ತದೆ. ಹಾರಾಟದ ದತ್ತಾಂಶಗಳನ್ನು ಕಾಂತ ಪಟ್ಟಿಯ ಮೇಲೆ ದಾಸ್ತಾನಿಸುವರು. ಇವಲ್ಲದೆ ನೈಜ ಕಾಲ ಶಾಶ್ವತ ಆಂದೋಳನ ಲೇಖ ದಾಖಲೆಯನ್ನು (ರಿಯಲ್ ಟೈಮ್ ಪರ್ಮನೆಂಟ್ ಅಸಿಲೋಸ್ಕೋಪ್ ರಿಕಾರ್ಡ್) ಕೂಡ ಮಾಡಲಾಗುತ್ತದೆ. ಹಾರಾಟಕ್ಕೆ ಮೊದಲು ಹಾಗೂ ಹಾರಾಟದ ವೇಳೆಯಲ್ಲಿ ಪಾವತಿ ಹೊರೆ ವ್ಯವಸ್ಥೆಯ ನಿರ್ವಹಣೆಯನ್ನು ಅಂದೋಳನ ಲೇಖಿಗಳ ನೆರವಿನಿಂದ ಅನುಶ್ರವಣಿಸಬಹುದು. ಇವುಗಳಿಗೆ ಕ್ರಿಯಾತ್ಮಕ ಲಕ್ಷಣಗಳ (ಫಂಕ್ಷನಲ್ ಫೀಚರ್ಸ್) ಒಂದು ಸರಣಿಯೇ ಉಂಟು. ಆಔಗಿಂP ವ್ಯವಸ್ಥೆಗೆ ರಾಕೆಟ್ ವಾಹನದ ಮೇಲೆ ಪಾವತಿ ಹೊರೆಯ ಒಂದು ಭಾಗವಾಗಿ ಪಟು ಟ್ರಾನ್ಸಂಡರ್ (ಟ್ರಾನ್ಸಮೀಟರ್-ರೆಸ್ಪಾಂಡರ್) ಬೇಕಾಗುತ್ತದೆ. 30 ಕಿ.ಮೀ. ಗಿಂತ ಹೆಚ್ಚಿನ ಉನ್ನತಿಗಳಿಗೆ ಪಾವತಿ ಹೊರೆಯನ್ನು ದೂರಮಾಪನ ಮಾಡಲು ಂಓ/ಉಒಆ-1 ಎಂಬ ರೋವಿನ್ ಸೆಟ್ಟನ್ನು ಬಳಸಲಾಗುವುದು. 1680 mಛಿ ಪ್ರೇಷಕವೊಂದನ್ನು (ಟ್ರಾನ್ಸ್‍ಮೀಟರ್) ಲೋಹೀಕೃತ ಪ್ಯಾರಚೂಟಿಗೆ ಲಗತ್ತಿಸಿದೆ. ಇದನ್ನು ಉಪಕರಣ ಸಹಿತವಾದ ಪಾವತಿ ಹೊರೆ ಯಾವುದೋ ಎತ್ತರದಲ್ಲಿ ಬಿಡುಗಡೆ ಮಾಡುವುದು. ಆ ಸ್ಥಳದ ಕ್ಷಿತಿಜಾಂಶ (ಅಜಿಮತ್) ಮತ್ತು ಉನ್ನತ ಕೋನಗಳನ್ನು ಂಓ/ಉಒಆ-1 ರೋವಿನ್ ಸೆಟ್ ಸೂಚಿಸುತ್ತದೆ. ಲೋಹೀಕೃತ ಪ್ಯಾರಚೂಟಿನ ರೇಡಾರ್ ಪಥಲೇಖನದಿಂದ ಲಭಿಸಿದ ಉನ್ನತಿಯೊಡನೆ ಕ್ಷಿತಿಜಾಂಶ ಮತ್ತು ಕೋನಗಳನ್ನು ಆಲೇಖಿಸುವುದರ (ಪ್ಲಾಟಿಂಗ್) ಮೂಲಕ ಮಾರುತಜವ ಮತ್ತು ದಿಶೆಗಳನ್ನು ನಿರ್ಧರಿಸಲಾಗುವುದು.

5 ಟೋನ್ ರೇಂಜಿಂಗ್ : ಟೋನ್ ರೇಂಜ್ ದೂರಮಾಪನ ವ್ಯತಿಕರಣಮಾಪಕ ಪಥಲೇಖನ ವ್ಯವಸ್ಥೆ (ಟೆಲಿಮೆಟ್ರಿ ಇಂಟರ್ಫೆರೋಮೀಟರ್ ಟ್ರ್ಯಾಕಿಂಗ್ ಸಿಸ್ಟಮ್) ದೂರಮಾಪನವನ್ನು ಬಳಸುವ ಯಾವುದೇ ರಾಕೆಟ್, ಬಲೂನ್ ಯಾ ವಾಯುಗಾಮಿ ವೈಜ್ಞಾನಿಕ ಉಪಕರಣಕ್ಕೆ ಪಥ ಮಾಹಿತಿಯನ್ನು ಒದಗಿಸುತ್ತದೆ. ಇದರಲ್ಲಿ ಮೂರು ಆಧಾರ ವ್ಯವಸ್ಥೆಗಳಿವೆ: ವಾಯುಗಾಮಿ, ಟೋನ್ಡ್ ರೇಂಜ್, ವ್ಯತಿಕರಣ ಮಾಪಕ, ವಾಯುಗಾಮಿ ವ್ಯವಸ್ಥೆ ರೇಂಜಿಗ್ ಅಭಿಗ್ರಹಣವನ್ನು (ರಿಸೆಪ್ಷನ್) ದೂರಮಾಪನ ಪ್ರೇಷಣೆಯನ್ನೂ (ಟ್ರಾನ್‍ಮಿಶನ್) ಟೋನ್ಡ್ ರೇಂಜ್ ವ್ಯವಸ್ಥೆ ದೂರ ಯಾ ವ್ಯಾಪ್ತಿ ದತ್ತಾಂಶಗಳನ್ನೂ ವ್ಯತಿಕರಣಮಾಪಕ ವ್ಯವಸ್ಥೆ ಕೋನೀಯ ದತ್ತಾಂಶಗಳನ್ನೂ ಒದಗಿಸುತ್ತವೆ. 
6 ಫೊಟೋಗ್ರಾಫಿಕ್ ಸೌಕರ್ಯ : ರೇಂಜಿನಲ್ಲಿ ಉಡಾವಣೆಯನ್ನೂ ಇತರ ಕ್ರಿಯೆಗಳನ್ನೂ ಬೆಂಬಲಿಸಲು ಫೊಟೋಗ್ರಾಫಿಕ್ ಸೌಕರ್ಯವನ್ನು ಒದಗಿಸಿದೆ. ರಾಕೆಟಿನ ಸೀಮೋಲ್ಲಂಘನದ (ಟೇಕ್ ಆಫ್) ವಿನ್ಯಾಸ ಚಿತ್ರ ಸೆರೆಹಿಡಿಯಲು ಸೆಕೆಂಡಿಗೆ 250 ಅಂಕಣಗಳನ್ನು ದಾಖಲಿಸಬಲ್ಲ ವಿದ್ಯುಚ್ಚಾಲಿತ ವಿಶೇಷ ಕೆಮರವನ್ನು ಉಪಯೋಗಿಸುವರು. ವಿಶೇಷಾವಶ್ಯಕತೆಗಳಿಗಾಗಿ ಭೂಪರೀಕ್ಷಣೆಗಳನ್ನು (ಗ್ರೌಂಡ್ ಟೆಸ್À್ಟ್ಸ) ಫೋಟೋ ತೆಗೆಯಲು ಕೂಡ ಈ ಸೌಕರ್ಯವನ್ನು ಬಳಸಬಹುದು.

7 ಸಂಪರ್ಕ ಸೌಕರ್ಯಗಳು : ಮೂರು ವಿಧದವನ್ನು ಒದಗಿಸಲಾಗಿದೆ. (i) ರೇಡಿಯೋ ಸಂಪರ್ಕ: ಪ್ರೇಷಿಸಬಲ್ಲ ಹಾಗೂ ಅಭಿಗ್ರಹಿಸಬಲ್ಲ ಠಾಣ್ಯವನ್ನು ಒಂದು ರೇಡಿಯೋ ಸಂಪರ್ಕ ಸೌಕರ್ಯ ರೇಂಜಿನಲ್ಲಿ ಉಂಟು. ಇದನ್ನು ನಿಯಂತ್ರಣ ಕೇಂದ್ರ, ಖಿಇಖಐS ಒ[-4ಹೆಲಿಕಾಪ್ಟರ್, ಖಿಇಖಐS ಕಡಲದೋಣಿ- ಇವುಗಳ ನಡುವೆ ಉಡಾವಣಾ ಕ್ರಿಯೆಗಳ ವೇಳೆ ದ್ವಿಮಾರ್ಗೀ ಸಂಪರ್ಕಕ್ಕಾಗಿ ಉಪಯೇಗಿಸಲಾಗುವುದು.ಅಷ್ಟೇ ಅಲ್ಲ-ಇದನ್ನು ಮುಂಬಯಿಯೊಡನೆ ಮತ್ತು ಕೆಲವೇಳೆಗಳಲ್ಲಿ ಜಂಟಿ ಸಹಯೋಗ ಕಾರ್ಯಕ್ರಮಗಳೊಡನೆ ಸಂಬಂಧ ಪಡೆದಿರುವ ವಿದೇಶೀ ಠಾಣ್ಯಗಳೊಡನೆ ಕಡಲಿನಾಚೆ ಸಂಪರ್ಕ ಹೊಂದಲು ಕೂಡ ಬಳಸುವುದಿದೆ. 

(ii) ಅಂತರ ಸಂಪರ್ಕ : ರೇಂಜಿನಲ್ಲಿ ಎಲ್ಲ ಮುಖ್ಯ ಕ್ರಿಯಾ ಕೇಂದ್ರಕೇಂದ್ರಗಳಲ್ಲಿಯೂ ಜಂಟಿ ನಾಲೆಯ ಹಿಂದು-ಮುಂದು ಅಂತರ ಸಂಪರ್ಕ (ಇಂಟರ್ ಕಾಮ್) ಸೌಕರ್ಯ ಉಂಟು. ಇದರಿಂದಾಗಿ, ಉಡಾವಣೆಯಲ್ಲಿ ಭಾಗವಹಿಸುವ ಎಲ್ಲ ಕ್ರಿಯಾ ಕೇಂದ್ರಗಳ ನಡುವೆಯೂ ತತ್‍ಕ್ಷಣದ ಮಾಹಿತಿ ವಿನಿಮಯ ಸಾಧ್ಯವಾಗುತ್ತದೆ

iii) ದೂರವಾಣಿ ಸಂಪರ್ಕ : ಆಂತರಿಕ ಹಾಗೂ ಬಾಹ್ಯ ಸಂಪರ್ಕಗಳನ್ನು ದೂರವಾಣಿಯಮೂಲಕ ಕೂಡ ಒದಗಿಸಲಾಗಿದೆ.

8 ರೇಂಜಿನಲ್ಲಿ ಕಾಲಮಾನ ವ್ಯವಸ್ತೆ : ವಿಶೇಷಾಲೇಖ್ಯಾನುಸಾರ ತಯಾರಿಸಿದ ಟ್ರಾನ್ಸಿಸ್ಟರೀಕೃತ ಸ್ಫಟಿಕ ನಿಯಂತ್ರಿತ ಎಲೆಕ್ಟ್ರಾನಿಕ್ ಕಾಲನಿಯಾಮಕ (ಟೈಮರ್) ಘಟಕ ಉಂಟು.	ಇದುಅಂಕ(ಡಿಜಿಟಲ್) ಗಡಿಯಾರವೊಂದನ್ನು ಸಮಶ್ಚರ ಮೋಟರಿನ ಮೂಲಕ ಪ್ರವರ್ತಿಸುತ್ತದೆ. ಂIಖ, WWಗಿ, ಎಎಙ, ಂಖಿಂ ಇವೇ ಮುಂತಾದೆಡೆಗಳಿಂದ ರೇಡಿಯೋ ಮೂಲಕ ಬರುವ ಶಿಷ್ಟ ಕಾಲ ಸಂಜ್ಞೆಗಳೊಡನೆ ಈ ಗಡಿಯಾರವನ್ನು ಸಮಶ್ಚರಗೊಳಿಸಬಹುದು. ಇದರ ನಿಖರತೆ ಕೊಠಡಿ ಉಷúತೆಯಲ್ಲಿ (720 +/-30ಜಿ) 24 ಘಂಟೆಗಳ ಅಂತರದಲ್ಲಿ +/- 0.3 ಸೆಕೆಂಡ್ ಇದು ಉಡಾವಣೆಯ ನಡುವಳಿಕೆಗಳ ವೇಳೆ ಎಲ್ಲ ಉದ್ದೇಶಗಳಿಗೂ ಶಿಷ್ಟಕಾಲವಾಗಿ ಉಪಯುಕ್ತವಾಗುವುದು. 
9 ಹವಾವೈಜ್ಞಾನಿಕ ಬೆಂಬಲ : ರೇಂಜಿನಲ್ಲಿ ಒಂದು ಹವಾವೈಜ್ಞಾನಿಕ ವೀಕ್ಷಣಾಲಯ ಉಂಟು. ಇದರಲ್ಲಿ ವರ್ಷವಿಡೀ ಮಾಮೂಲಿ ಹವಾ ವೈಜ್ಞಾನಿಕ ವೀಕ್ಷಣೆಗಳನ್ನು ಮಾಡಿ ಗುರುತಿಸಲಾಗುವುದು. ಇಲ್ಲಿ ಉಡಾವಣೆಯ ದಿನಗಳೆಂದು ಹವಾ ಮಾಹಿತಿ ಹಾಗೂ ಮುನ್ಸೂಚನೆ ನೀಡಲು, ಮಾರುತ ದತ್ತಾಂಶಗಳನ್ನು ಒದಗಿಸಲು, ಇತ್ಯಾದಿ , ವಿಶೇಷ ಏರ್ಪಾಡುಗಳನ್ನು ಮಾಡಲಾಗುವುದು. 200 ಅಡಿ ಎತ್ತರದ ಒಂದು ಗೋಪುರ ಇಲ್ಲಿದೆ. ಅದರಲ್ಲಿ ಸರಿಸುಮಾರು 30 ಅಡಿ ಅಂತರದ ಎತ್ತರಗಳಲ್ಲಿ ಮಾರುತೋಪಕರಣಗಳನ್ನು ಅಳವಡಿಸಿದೆ.

10 ಇತರ ಸೌಕರ್ಯಗಳು : ಮುಖ್ಯವಾಗಿ ಹೆಸರಿಸಬೇಕಾದಂಥವು (i) ರೇಂಜಿನ ಹಾಗೂ ಅದರ ಆಸುಪಾಸಿನ ಸಂರಕ್ಷಣೆಯನ್ನು ನಿರ್ವಹಿಸಲು ತಕ್ಕ ವ್ಯವಸ್ಥೆಗಳು : (ii) ಉಡಾವಣೆಯ ದಿವಸಗಳಂದು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನೂ ಪರೀಕ್ಷಣೆಗಳನ್ನೂ ನಿಭಾಯಿಸುವ ಏರ್ಪಾಡುಗಳು; (iii) ರಾಕೆಟ್ ಎಂಜಿನೀಯರಿಂಗ್ ವ್ಯವಸ್ಥೆ; (iv) ಪಾವತಿ ಹೊರೆಯನ್ನು ನಿರ್ಧರಿಸುವ ವ್ಯವಸ್ಥೆ; (v) ಕಾರ್ಯಾಗಾರ; ಇತ್ಯಾದಿ.
ಸಿದ್ಧಿ ಸಾಧನೆಗಳು : ( I ) 25-65 ಞm ಎತ್ತರದ ವಲಯದಲ್ಲಿನ ಮಾರುತಗಳ ಜವ, ದಿಶೆ, ಉಷ್ಣತೆ, ಕ್ಷೋಭೆ- ಇವುಗಳ ಅಧ್ಯಯನ. (i) ಸೋಡಿಯಮ್ ಮತ್ತು ಟ್ರೈಮೆಥಿಲ್ ಅಲ್ಯೂಮಿನಮಿನಂಥ ಪಾವತಿ ಹೊರೆಗಳನ್ನು ತೇವ ಮೋಡ ತಂತ್ರಕ್ಕೆ ಉಪಯೋಗಿಸಿಕೊಂಡು 80 ಞm ಮೇಲಕ್ಕೆ 150 ಞm ವರೆಗೂ ತಟಸ್ಥ ವಾಯುಮಂಡಲ ಮಾರುತಗಳ ಅಧ್ಯಯನ.

(iii) ಬೇರಿಯಮ್ ತಂತ್ರದಿಂದ ಅಯಾನ್‍ಗೋಳದಲ್ಲಿನ ವಿದ್ಯುತ್ ಕ್ಷೇತ್ರಗಳ ಅಧ್ಯಯನ; ಅನುರಣನ ಪರಿಶೋಧನಿಯಿಂದ (ರೆಸೊನೆನ್ಸ್ ಪ್ರೋಬ್) ಎಲೆಕ್ಟ್ರಾನ್ ಸಾಂದ್ರತೆಯ ಅಧ್ಯಯನ.

(iv) ಪ್ರೋಟಾನ್ ಪರಿಶುದ್ಧತಾ ಕಾಂತಮಾಪಕ (ಪ್ರೋಟಾನ್ ಪ್ರೆಸಿಶನ್ ಮ್ಯಾಗ್ನೆಟೋಮೀಟರ್) ಮತ್ತು ಲ್ಯಾಂಗಮೂರ್ ಪರಿಶೋಧನೆಯನ್ನು ಉಪಯೋಗಿಸಿಕೊಂಡು ತಟಸ್ಥ ವಾಯುಮಂಡಲದ ಮಾರುತಗಳು, ಉಷ್ಣತೆ ಮತ್ತು ಆಯಾನ್ ಸಾಂದ್ರತಾ ಪಾಶ್ರ್ವ ಚಿತ್ರಗಳು (ಡೆನ್ಸಿಟಿ ಪ್ರೊಫೈಲ್ಸ್)-ಇವುಗಳ ಅಧ್ಯಯನ. ಇದರಲ್ಲಿ ಕಾಂತೀಯ ಸಮಭಾಜಕೀಯ ವೃತ್ತದ ಸಮೀಪದಲ್ಲಿನ ಆಯಾನ್‍ಗೋಳದಲ್ಲಿ ವಿದ್ಯುತ್ ಪ್ರವಾಹ ವ್ಯವಸ್ಥೆಗಳ ತೀವ್ರತೆಯ ಅಧ್ಯಯನವೂ ಸೇರಿದೆ.

(v) ಲ್ಯಾಂಗಮೂರ್ ಪರಿಶೋಧನೆಯನ್ನು ಉಪಯೋಗಿಸಿಕೊಂಡು ಆಯಾನ್ ಗೋಳದಲ್ಲಿನ ಎಲೆಕ್ಟ್ರಾನ್ ಸಾಂದ್ರತೆಯ ಅಳತೆ. 

(vi) ರೇಡಿಯೋ ಅವರ್ತಾಂಕ ರಾಶಿ ರೋಹಿತಮಾಪಕ (ರೇಡಿಯೋ ಫ್ರೀಕ್ವೆನ್ಸಿ ಮಾಸ್ ಸ್ಪೆಕ್ಟ್ರೋಮೀಟರ್) ಪಾವತಿ ಹೊರೆಯನ್ನು ಉಪಯೋಗಿಸಿಕೊಂಡು 100-155 ಞm. ವಲಯದ ಉನ್ನತ ವಾಯುಮಂಡಲದ ತಟಸ್ಥ ಸಂಯೋಜನೆಯ ಅಳತೆ.

(vii) ರೇಡಿಯೋ ಸಂಚರಣ (ಪ್ರೊಪಗೇಶನ್) ಪ್ರಯೋಗಗಳ ಬಳಕೆಯಿಂದ ಆಯಾನ್ ಗೋಳದಲ್ಲಿನ ಆ ವಲಯದಲ್ಲಿ ಸಮಭಾಜಕೀಯ ಎಲೆಕ್ಟ್ರಾನ್ ಸಾಂದ್ರತಾ ವಿತರಣೆಯ ವಿಚಾರ ಮಾಹಿತಿ ಸಂಪಾದನೆ.
(viii) ಖಗೋಳದಲ್ಲಿನ ಎಕ್ಸ್ ಕಿರಣಾಕರಗಳ ಅಧ್ಯಯನ ಹಾಗೂ ದಕ್ಷಿಣಾಕಾಶದಲ್ಲಿ ಈ ತನಕ ಅನಾವಿಷ್ಕøತವಾದ ಎಕ್ಸ್‍ಕಿರಣಾಕರಗಳ ಮೋಜಣಿ. 

ಈ ಮೇಲಿನ ಪ್ರಯೋಗಗಳನ್ನು ಭಾರತೀಯ ಹಾಗೂ ವಿದೇಶೀಯ ವಿಜ್ಞಾನಿಗಳು ನಿರ್ವಹಿಸಿದ್ದಾರೆ. ಇವುಗಳ ಪೈಕಿ ಕೆಲವು ವಿದೇಶಗಳ ಹಲವಾರು ಪ್ರಯೋಗ ಕೇಂದ್ರಗಳೊಡನೆ ಸಹಯೋಗದಿಂದ ನಡೆಸಿದಂಥವೂ ಇವೆ. 
1974-75ರಲ್ಲಿ ಖಿಇಖಐS ನಿಂದ 102 ರಾಕೆಟುಗಳನ್ನು ಉಡಾಯಿಸಲಾಯಿತು. ವಿವರಗಳು ಹೀಗಿವೆ : 

				ಒ-100			… 24
				ಸೆಂಟಾಲ್ II-ಃ			… 1
				ಮೇನಕ-I ಪರೀಕ್ಷಣ ರಾಕೆಟ್	… 12
 				ಮೇನಕ-II 			… 54
 				ಖಊ-125			… 2
				ಖಊ-100			… 9
							-------------
						 	ಮೊತ್ತ 102
	ಆರ್ಯಭಟ ಕೃತಕೋಪಗ್ರಹವನ್ನು ಭಾತರ ಯಶಸ್ವಿಯಾಗಿ ಉಡಾಯಿಸುವ ದಿಶೆಯಲ್ಲಿ (19)- 4-1975 ಖಿಇಖಐS. ತತ್ಪೂರ್ವ ನಡೆಸಿದಂತ ಹಲವಾರು ಪ್ರಯೋಗಗಳು ವಿಶೇಷ ಪ್ರಯೋಜನಕಾರಿಗಳಾಗಿದ್ದುವು.				 										(ಎಚ್. ಜಿ. ಎಸ್. ಎಂ.)
ಪರಿಷ್ಕರಣೆ :
ಹೆಚ್.ಆರ್.ಆರ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ